Welcome To Savi Savi Nenapu

Naveen Chinthakaaya

Friday, November 23, 2012

Check out Naveen Kumar's photos on Facebook.

facebook
Check out Naveen Kumar's photos on Facebook.
If you sign up for Facebook, you'll be able to stay connected with friends by seeing their photos and videos, staying up to date with their latest status updates, exchanging messages and more.
Join Naveen Kumar on Facebook
This message was sent to naveenkumarkn2003.chinthakaaya@blogger.com. If you don't want to receive these emails from Facebook in the future or have your email address used for friend suggestions, please unsubscribe.
Facebook, Inc., Attention: Department 415, PO Box 10005, Palo Alto, CA 94303

Thursday, November 22, 2012

ಸಾವನದುರ್ಗ - Saavanadurga

ಸಾವನದುರ್ಗ


ಸಾವನದುರ್ಗವು ಭಾರತ ದೇಶದ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಿಂದ ೩೩ ಕಿಮೀ ಪಶ್ಚಿಮದಲ್ಲಿರುವ ಮಾಗಡಿ ರಸ್ತೆಯ 12.919654, 77.292881 ಎದುರಿಗಿರುವ ಒಂದು ಬೆಟ್ಟವಾಗಿದೆ. ಆ ಬೆಟ್ಟವು ಅದರ ಮೇಲಿರುವ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ ಮತ್ತು ಪ್ರಪಂಚದಲ್ಲೇ ಅತ್ಯಂದ ದೊಡ್ಡ ಏಕಶಿಲಾ ಬೆಟ್ಟವಾಗಿದೆ. ಇದು ಸಮುದ್ರ ಮಟ್ಟಕ್ಕಿಂತ ೧೨೨೬ ಮೀಟರ್‌ಗಳಷ್ಟು ಎತ್ತರದಲ್ಲಿದೆ ಮತ್ತು ಡೆಕ್ಕನ್ ಪ್ರಸ್ಥಭೂಮಿಯ ಒಂದು ಭಾಗವಾಗಿ ರೂಪುಕೊಡುತ್ತದೆ. ಇದು ಪರ್ಯಾಯ ದ್ವೀಪದ ನೈಸ್‌ಗಳು, ಮೂಲ ಸ್ತರ
ಪ್ರವಿಷ್ಟಾಗ್ನಿಶಿಲೆಗಳು ಮತ್ತು ಲ್ಯಾಟರೈಟ್‌ಗಳನ್ನು ಒಳಗೊಂಡಿದೆ. ಹತ್ತಿರದಲ್ಲಿ ಅರ್ಕಾವತಿ ನದಿಯು ತಿಪ್ಪಗೊಂಡನಹಳ್ಳಿ ಜಲಾಶಯದ ಮೂಲಕ ಮತ್ತು ಮಂಚನಬೆಲೆ ಅಣೆಕಟ್ಟಿನತ್ತ ಹರಿಯುತ್ತದೆ.

ಹೆಸರಿನ ಉಗಮ

ಸಾವನದುರ್ಗವು ಸ್ಥಳೀಯವಾಗಿ ಕರಿಗುಡ್ಡ (ಕಪ್ಪು ಬೆಟ್ಟ) ಮತ್ತು ಬಿಳಿಗುಡ್ಡ (ಬಿಳಿ ಬೆಟ್ಟ) ಎಂಬ ಹೆಸರು ಹೊಂದಿರುವ ಎರಡು ಬೆಟ್ಟಗಳಿಂದ ರೂಪುಗೊಂಡಿದೆ. ಈ ಬೆಟ್ಟದ ಹೆಸರಿನ ಆರಂಭಿದ ದಾಖಲೆಯು ಕ್ರಿ.ಶ. ೧೩೪೦ ರಲ್ಲಿ ಮಾಡಬಲುವಿನ ಹೊಯ್ಸಳ ಬಲ್ಲಾಳ III ರ ಅವಧಿಯಲ್ಲಿ ಕಂಡುಬಂದಿದೆ, ಇಲ್ಲಿ ಇದನ್ನು ಸಾವಂಡಿ ಎಂದು ಕರೆಯಲಾಗುತ್ತದೆ. ಈ ಹೆಸರು ಅಚ್ಯುತರಾಯನ ಅಧೀನದ ಮಾಗಡಿಯ ಗವರ್ನರ್ ಸಾಮಂತರಾಯ ನಿಗೆ ಸೇರಿದ್ದೆಂದು ಹೇಳಲಾದ ಸಾಮಂತದುರ್ಗ ದಿಂದ ಹುಟ್ಟಿಕೊಂಡಿದೆಯೆಂದು ಮತ್ತೊಂದು ಅವಲೋಕನವು ಸೂಚಿಸುತ್ತದೆ, ಆದರೂ ಇದನ್ನು ದೃಢಪಡಿಸುವ ಯಾವುದೇ ಲಿಖಿತ ದಾಖಲೆಗಳಿಲ್ಲ. ಇದು ಕೆಂಪೆಗೌಡದಂತೆ ಮಾಗಡಿ ರಾಜರ ಎರಡನೇ ರಾಜಧಾನಿಯಾಗಿತ್ತು. ೧೬೩೮ ರಿಂದ ೧೭೨೮ ರವರೆಗೆ, ಮೈಸೂರು ಈ ಸ್ಥಳವನ್ನು ವಶಪಡಿಸಿಕೊಂಡಿತು ಮತ್ತು ದಳವಾಯಿ ದೇವರಾಜರು ನೆಲಪಟ್ಟಣದಲ್ಲಿ ಅರಮನೆಯನ್ನು ನಿರ್ಮಿಸಿಕೊಂಡು ಈ ಸ್ಥಳದಲ್ಲಿ ವಾಸಿಸಿದರು. ೧೭೯೧ ರಲ್ಲಿ ಲಾರ್ಡ್ ಕಾರ್ನ್‌ವಾಲಿಸ್ ಮೂರನೇ ಆಗ್ಲೊ-ಮೈಸೂರು ಯುದ್ಧದ ಸಂದರ್ಭದಲ್ಲಿ ಟಿಪ್ಪು ಸುಲ್ತಾನನ ಸೈನ್ಯದಿಂದ ಇದನ್ನು ವಶಪಡಿಸಿಕೊಂಡರು.[೧][೨] ರಾಬರ್ಟ್ ಹೋಮ್ ಆತನ ಸೆಲೆಕ್ಟ್ ವ್ಯೂವ್ಸ್ ಇನ್ ಮೈಸೂರ್ ‌ನಲ್ಲಿ (೧೭೯೪) ಬೆಂಗಳೂರಿನಿಂದ ಬೆಟ್ಟದ ದೂರದ ದೃಶ್ಯಗಳನ್ನು ತೋರಿಸುತ್ತಾರೆ.[೩] ಆತ ಇದನ್ನು ಸಾವಿನದುರ್ಗ ಅಥವಾ ಫೋರ್ಟ್ ಆಫ್ ಡೆತ್ ಎಂದು ಕರೆದಿದ್ದಾರೆ. ಈ ಬೆಟ್ಟದ ತುದಿಯನ್ನು ತಲುಪಲು ಮೆಟ್ಟಿಲುಗಳಿರಲಿಲ್ಲ ಮತ್ತು ಇದರ ಸುತ್ತ ಬಿದಿರು ಮತ್ತು ಇತರ ಮರಗಳು ಆವರಿಸಿಕೊಂಡು ಒಂದು ತಡೆಗಟ್ಟನ್ನು ರೂಪಿಸಿದ್ದವು.
ಈ ಪ್ರದೇಶದಲ್ಲಿ ಬೃಹತ್ ಶಿಲೆಯ ಹೂಳುವ ಸಮಾಧಿಗಳು ಕಂಡುಬಂದಿವೆ.[೪]. ಸಂಸ್ಕೃತದಲ್ಲಿ ಸಾವಣವೆಂದರೆ ಮೂರು ಬಾರಿ ಮಾಡುವ ವಿಧಿವಿಹಿತ ಕ್ರಮವೆಂದು ಅರ್ಥ.

ಪ್ರವಾಸೋದ್ಯಮ

ಸಾವನದುರ್ಗ ಬೆಟ್ಟಗಳಿಗೆ ಯಾತ್ರಾರ್ಥಿಗಳು ಆಗಿಂದಾಗ್ಗೆ ಹೋಗುತ್ತಿರುತ್ತಾರೆ. ಇವರು ಬೆಟ್ಟದ ಬುಡದಲ್ಲಿರುವ ಸಾವಂಡಿ ವೀರಭದ್ರೇಶ್ವರ ಸ್ವಾಮಿ ಮತ್ತು ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲು ಬರುತ್ತಾರೆ. ವಿಹಾರ ಪ್ರವಾಸಿಗಳು ಬೆಟ್ಟದ ನಿರ್ಮಲವೂ ಪ್ರಶಾಂತವೂ ಆದ ಪರಿಸರದಲ್ಲಿ ಸಮಯ ಕಳೆಯಲು ಬರುತ್ತಾರೆ. ಶಿಲಾ ಆರೋಹಿ, ಗುಹೆ ಅನ್ವೇಷಕರು ಮತ್ತು ಸಾಹಿಸಗಳು ಈ ಸ್ಥಳಕ್ಕೆ ಆಗಾಗ್ಗೆ ಬರುವ ಇತರರಾಗಿದ್ದಾರೆ.
ಬಸ್ ಮಾರ್ಗ: ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಮಾಗಡಿ ರಸ್ತೆಗೆ ಹೋಗುವ ಬಸ್ ಹಿಡಿಯಬೇಕು. ಈ ಬಸ್ ಸಾಮಾನ್ಯವಾಗಿ ನಿಮ್ಮನ್ನು ನಗರದ ಮಿತಿಯೊಳಗೆ ಮಾಗಡಿ ರಸ್ತೆಯ ಒಂದು ಖಚಿತವಾದ ಸ್ಥಳದಲ್ಲಿ ಬಿಡುತ್ತದೆ. ಅಲ್ಲಿಂದ ನೀವು ಮಾಗಡಿ ರಸ್ತೆ ಜಂಕ್ಷನ್‌ಗೆ ಮತ್ತೊಂದು ಬಸ್ ಹಿಡಿಯಬೇಕು. ಅಲ್ಲಿಂದ ನೀವು ಸಾವನದುರ್ಗಕ್ಕೆ ಹೋಗಲು ಎಡಕ್ಕೆ ತಿರುಗಬೇಕು (ಆ ಸ್ಥಳದಿಂದ ೧೨ ಕಿಮೀ ದೂರವಿದೆ), ಇಲ್ಲಿಂದ ಹೊಸಪೇಟೆ ಗೇಟ್‌ಗೆ (ಸಾವನದುರ್ಗವು ಇಲ್ಲಿದೆಯೆಂದು ಹೇಳಬಹುದು) ಹೋಗಲು ಖಾಸಗಿ ಮತ್ತು KSRTC ಬಸ್‌ಗಳು ಲಭ್ಯಯಿವೆ.ಬೆಂಗಳೂರಿನಿಂದ ಇಲ್ಲಿಗೆ ಹೋಗಲು ಒಟ್ಟು ಪ್ರಯಾಣ ಅವಧಿ ೨ ಗಂಟೆ ೧೫ ನಿಮಿಷಗಳು. (ನಿಮಗೆ ಬಸ್ ಸಿಗದಿದ್ದರೆ, ಈ ೧೨ ಕಿಮೀ ದೂರವನ್ನು ತಲುಪಲು ಆಟೊವನ್ನು ಬಳಸಬಹುದು).
ರಾಮನಗರಂ ಒಂದಿಗೆ ಇದೂ ಸಹ ಡೇವಿಡ್ ಲೀನ್‌ನ ಚಲನಚಿತ್ರ ಎ ಪಾಸೇಜ್ ಟು ಇಂಡಿಯಾ ವನ್ನು ಚಿತ್ರೀಕರಿಸಲು ಬಳಸಿದ ಒಂದು ಸ್ಥಳವಾಗಿದೆ.

--
http://i33.tinypic.com/xdxsvl.jpg

 
NaveenChinthakaaya - Creative Guy.......
http://chinthakaaya.blogspot.com/
http://cid-f2be635aeac89a38.skydrive.live.com/browse.aspx/.Public


'Argument wins the situations but loses the person. So when arguing with your loved ones, remember that situations are not more important than your loved ones...'

Tuesday, November 20, 2012

ಯಾವ ದಿನ ಕೂದಲುಗಳನ್ನು ಕತ್ತರಿಸಬಾರದು





ಯಾವ ದಿನ ಕೂದಲುಗಳನ್ನು ಕತ್ತರಿಸಬಾರದು? ಏಕೆ ಕತ್ತರಿಸಬಾರದು?

ಅ.ಆದಷ್ಟು ಅಶುಭ ದಿನ, ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನ, ಹಾಗೆಯೇ ಸುಡುಬಿಸಿಲಿರುವ ಮಧ್ಯಾಹ್ನ, ಸಾಯಂಕಾಲ ಮತ್ತು ರಾತ್ರಿಯ ಹೊತ್
ತು ಕೂದಲುಗಳನ್ನು ಕತ್ತರಿಸದಿರುವುದರ ಹಿಂದಿನ ಶಾಸ್ತ್ರ

೧.ಆದಷ್ಟು ಅಶುಭ ದಿನಗಳಂದು, ಅಮಾವಾಸ್ಯೆ ಮತ್ತು ಹುಣ್ಣಿಮೆ ಈ ತಿಥಿಗಳಂದು ಕೂದಲುಗಳನ್ನು ಕತ್ತರಿಸಬಾರದು; ಏಕೆಂದರೆ ಈ ದಿನಗಳಂದು ವಾಯುಮಂಡಲದಲ್ಲಿ ರಜ-ತಮಾತ್ಮಕ ಲಹರಿಗಳ ಕಾರ್ಯದ ಪ್ರಮಾಣವು ಹೆಚ್ಚಿರುತ್ತದೆ.

೨.ಕೂದಲುಗಳನ್ನು ಕತ್ತರಿಸಿದ ನಂತರ ಅವುಗಳ ತುದಿಗಳು ತೆರೆಯಲ್ಪಡುವುದರಿಂದ ಕೇಶನಳಿಕೆಗಳಿಂದ ರಜ-ತಮಾತ್ಮಕ ಲಹರಿಗಳು ಕೂದಲುಗಳಲ್ಲಿ ಸೇರಿಕೊಂಡು ಕೂದಲುಗಳ ಬುಡದಲ್ಲಿ ಘನೀಭವಿಸುತ್ತವೆ.

೩.ಇದರಿಂದ ಕೂದಲುಗಳ ಬುಡದಲ್ಲಿ ಕೆಟ್ಟ ಶಕ್ತಿಗಳ ಸ್ಥಾನಗಳು ನಿರ್ಮಾಣವಾಗುತ್ತವೆ; ಆದುದರಿಂದ ರಜ-ತಮದ ಪ್ರಾಬಲ್ಯವಿರುವ ದಿನಗಳಲ್ಲಿ ಕೂದಲುಗಳನ್ನು ಕತ್ತರಿಸಿಕೊಳ್ಳುವ ಕೃತಿಯನ್ನು ಮಾಡಬಾರದು.

೪.ಆದಷ್ಟು ಸಾಯಂಕಾಲದ ಸಮಯ ಅಥವಾ ರಾತ್ರಿ, ಹಾಗೆಯೇ ಸುಡುಬಿಸಿಲಿರುವ ಮಧ್ಯಾಹ್ನದ ಹೊತ್ತಿನಲ್ಲಿ ಕೂದಲುಗಳನ್ನು ಕತ್ತರಿಸಬಾರದು; ಏಕೆಂದರೆ ಈ ಕಾಲವೂ ರಜ-ತಮಾತ್ಮಕ ಲಹರಿಗಳನ್ನು ಜಾಗೃತಗೊಳಿಸುವಂತಹದ್ದಾಗಿದೆ.

ಆ.ರಾಮನವಮಿ, ಹನುಮಾನಜಯಂತಿಗಳಂತಹ ಉತ್ಸವಗಳ ದಿನದಂದು ಕೂದಲುಗಳನ್ನು ಕತ್ತರಿಸಿಕೊಳ್ಳಬಾರದು!: ರಾಮನವಮಿ, ಹನುಮಾನಜಯಂತಿ ಇವುಗಳಂತಹ ಉತ್ಸವಗಳ ದಿನ ಕೂದಲುಗಳನ್ನು ಕತ್ತರಿಸಿಕೊಳ್ಳಬಾರದು; ಏಕೆಂದರೆ ಇಂತಹ ದಿನ ವಾಯು ಮಂಡಲದಲ್ಲಿ ಸಾತ್ತ್ವಿಕ ಲಹರಿಗಳ ಪ್ರಮಾಣವು ಅಧಿಕವಿರುತ್ತದೆ. ಇಂತಹ ದಿನ ಕೂದಲುಗಳನ್ನು ಕತ್ತರಿಸಿಕೊಳ್ಳುವಂತಹ ಅಶುಭ ಕೃತಿಯನ್ನು ಮಾಡಿ ವಾಯುಮಂಡಲದಲ್ಲಿ ರಜ-ತಮವನ್ನು ಪಸರಿ ಸುವ ಕಾರ್ಯವನ್ನು ಮಾಡುವುದರಿಂದ ಜೀವಕ್ಕೆ ಸಮಷ್ಟಿ ಪಾಪವನ್ನು ಎದುರಿಸಬೇಕಾಗುತ್ತದೆ.
ಇ.ಜನ್ಮವಾರ ಮತ್ತು ಜನ್ಮತಿಥಿಯಂದು ಕೂದಲುಗಳನ್ನು ಕತ್ತರಿಸಿಕೊಳ್ಳಬಾರದು!: ಜನ್ಮವಾರ ಮತ್ತು ಜನ್ಮತಿಥಿಯಂದೂ ಕೂದಲುಗಳನ್ನು ಕತ್ತರಿಸಿಕೊಳ್ಳಬಾರದು; ಏಕೆಂದರೆ ಇಂತಹ ದಿನ ನಮ್ಮ ಪ್ರಕೃತಿಗೆ ಸಂಬಂಧಿಸಿದ ಗ್ರಹ, ನಕ್ಷತ್ರ, ಹಾಗೆಯೇ ತಾರಾಮಂಡಲದಿಂದ ಬರುವ ಸಾತ್ತ್ವಿಕ ಲಹರಿಗಳನ್ನು ಗ್ರಹಿಸುವ ನಮ್ಮ ಕ್ಷಮತೆಯು ಕಡಿಮೆಯಾಗಿ ಉಪಾಸ್ಯ ದೇವತೆಯಿಂದ ಸಿಗುವ ಚೈತನ್ಯದ ಲಾಭವು ಕಡಿಮೆಯಾಗುತ್ತದೆ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ನಮಗೆ ಹಾನಿಯಾಗು ತ್ತದೆ. ಹಾಗೆಯೇ ಇತರರ ಆಶೀರ್ವಾದದಿಂದ ಸಿಗುವ ಶುಭಫಲವೂ ಕಡಿಮೆಯಾಗುತ್ತದೆ.
ಈ.ನಿಷ್ಕರ್ಷ: ಶುಭದಿನದಂದು ಕೂದಲುಗಳನ್ನು ಕತ್ತರಿಸಿಕೊಳ್ಳುವಂತಹ ಕೃತಿಯನ್ನು ಮಾಡಬಾರದು; ಏಕೆಂದರೆ ಇಂತಹ ದಿನ ಅಶುಭ ಕೃತಿಯನ್ನು ಮಾಡಿದುದರ ಸಮಷ್ಟಿ ಪಾಪ ತಗಲುತ್ತದೆ, ಹಾಗೆಯೇ ಅಶುಭ ದಿನಗಳಂದೂ ಇಂತಹ ಕೃತಿಯನ್ನು ಮಾಡಬಾರದು; ಏಕೆಂದರೆ ಈ ಕೃತಿಯಿಂದ ರಜ-ತಮಾತ್ಮಕ ಲಹರಿಗಳು ದೇಹದಲ್ಲಿ ಬರುವ ಪ್ರಮಾಣವು ಅಧಿಕವಾಗಿರುತ್ತದೆ. ಇತರ ಸಮಯದಲ್ಲಿ ಅಶುಭ ಸಮಯವನ್ನು ಬಿಟ್ಟು ಕೂದಲುಗಳನ್ನು ಕತ್ತರಿಸಿಕೊಳ್ಳಲು ಧರ್ಮವು ಅನುಮತಿ ನೀಡಿದೆ.
(ಆಧಾರ: ಸನಾತನ ಸಂಸ್ಥೆಯ ಗ್ರಂಥ 'ಕೂದಲುಗಳಿಗೆ ತೆಗೆದುಕೊಳ್ಳುವ ಕಾಳಜಿ')

--
http://i33.tinypic.com/xdxsvl.jpg

 
NaveenChinthakaaya - Creative Guy.......
http://chinthakaaya.blogspot.com/
http://cid-f2be635aeac89a38.skydrive.live.com/browse.aspx/.Public


'Argument wins the situations but loses the person. So when arguing with your loved ones, remember that situations are not more important than your loved ones...'

Tuesday, November 6, 2012

ಕುಕ್ಕೇಶ್ರೀ ಸುಬ್ರಹ್ಮಣ್ಯ ಸ್ವಾಮಿ




ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಸುಪ್ರಸಿದ್ಧ ದೇವಾಲಯ. ಇಲ್ಲಿ ಸುಬ್ರಹ್ಮಣ್ಯ ದೇವರನ್ನು ನಾಗ ರೂಪದಲ್ಲಿ ಆರಾಧಿಸಲಾಗುತ್ತದೆ.ನಾಗಾರಾಧನೆ ಇಲ್ಲಿ ಅತ್ಯಂತ ಮಹತ್ವವನ್ನು ಪಡೆದುಕೊಂಡಿದ್ದು ನಾಗಮಂಡಲವೆಂಬ ಸಾಂಪ್ರದಾಯಿಕ ನೃತ್ಯವನ್ನು ಕಾಣಬಹುದು.
ಇಲ್ಲಿನ ಸರ್ಪ ಸ೦ಸ್ಕಾರ ಬಹಳ ಶ್ರೇಷ್ಟ ಮತ್ತು ಪ್ರಸಿದ್ಢ. ಸರ್ಪ ದೋಷ ಇರುವವರು ಇಲ್ಲಿಗೆ ಬ೦ದು, ಸರ್ಪ ಸ೦ಸ್ಕಾರ ಮತ್ತು ನಾಗ ಪ್ರತಿಷ್ಟೆ ನೆರವೇರಿಸಿ ದೋಷ ಮುಕ್ತರಾಗುತ್ತಾರೆ. ಇತ್ತೀಚೆಗೆ ಇಲ್ಲಿಗೆ ಭೇಟಿ ನೀಡಿ ಈ ಕಾರ್ಯಗಳನ್ನು ನೆರವ
ೇರಿಸಿದ ವಿಖ್ಯಾತರಲ್ಲಿ ಸಚಿನ್ ತೆ೦ಡೂಲ್ಕರ್ ಮತ್ತು ಹೇಮಮಾಲಿನಿ ಸೇರಿದ್ದಾರೆ. ಇಲ್ಲಿಗೆ ಭೇಟಿ ಕೊಟ್ಟಲ್ಲಿ ಸಮೀಪದ "ಆದಿ ಸುಬ್ರಹ್ಮಣ್ಯ ಸ್ವಾಮಿ" ಯ ದೇವಾಲಯ ಮತ್ತು "ಕುಮಾರಧಾರ" ನದಿಯನ್ನು ಸ೦ದರ್ಶಿಸಲು ಮರೆಯ ಬೇಡಿ. ದಯವಿಟ್ಟು ಇಲ್ಲಿಗೆ ಒಮ್ಮೆ ಬೇಟಿ ಕೊಡಿ.

ಜಾತಕಗಳಲ್ಲಿನ ಸರ್ಪದೋಷ ಅಥವಾ ನಾಗದೋಷ, ಕಾಳಸರ್ಪದೋಷ ಇತ್ಯಾದಿ ದೋಷಗಳ ಕಾರಣದಿಂದ ಅನಾರೋಗ್ಯ, ತಡವಿವಾಹ, ವೈವಾಹಿಕ ಸುಖಭಂಗ, ಪುತ್ರಹೀನತೆ (ಗಂಡು ಸಂತಾನ ಇಲ್ಲದಿರುವುದು),ಸಂತಾನಹೀನತೆ (ಮಕ್ಕಳೇ ಆಗದಿರುವುದು,ಉದ್ಯೋಗದಲ್ಲಿ ಅಸಮಾಧಾನ,ಇತ್ಯಾದಿ ತೊಂದರೆಗಳನ್ನು ಅನುಭವಿಸುತ್ತಿರುವವರ ಈ ಮೇಲೆ ಹೇಳಲಾದ ದೋಷಗಳಿಗೆ ಪರಿಹಾರ ಮಾಡಿಸಲು ಕರ್ನಾಟಕದಲ್ಲಿರುವ ಅತ್ಯಂತ ಪವಿತ್ರವಾದ ನಾಗರೂಪದಲ್ಲಿರುವ ಸುಬ್ರಹ್ಮಣ್ಯಸ್ವಾಮಿಯ ದೇವಸ್ಥಾನವಿರುವ ಕ್ಷೇತ್ರ ಎಂದರೆ ಈ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ. ಈ ಕ್ಷೇತ್ರಕ್ಕೆ ಪ್ರಪಂಚದ ನಾನಾ ಮೂಲೆಗಳಿಂದ ಭಕ್ತರು ಬಂದು ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷಬಲಿ, ಇತ್ಯಾದಿ ಸೇವೆ ಸಲ್ಲಿಸಿ ದೋಷಮುಕ್ತರಾಗಿ ಸುಖಜೀವನ ನಡೆಸುತ್ತಿದ್ದಾರೆ. ಕುಜದೋಷವಿರುವವರೂ ಸಹಾ ಇಲ್ಲಿ ಪರಿಹಾರ ಕಾಣುತ್ತಾರೆ. ಕಾರ್ತಿಕೇಯ, ಸುಬ್ರಹ್ಮಣ್ಯ ಎಂದೆಲ್ಲಾ ಕರೆಸಿಕೊಳ್ಳುವ ಈ ದೇವನು ಕ್ಷೀರಪ್ರಿಯನು. ಭಕ್ತರ ದೋಷಗಳನ್ನು ಪರಿಹಾರ ಮಾಡುವ ಸಲುವಾಗಿಯೇ ಈ ಕ್ಷೇತ್ರದಲ್ಲಿ ನೆಲೆಸಿದ್ದಾನೆ, ಎಂದರೆ ತಪ್ಪಲ್ಲ.

--
http://i33.tinypic.com/xdxsvl.jpg

 
NaveenChinthakaaya - Creative Guy.......
http://chinthakaaya.blogspot.com/
http://cid-f2be635aeac89a38.skydrive.live.com/browse.aspx/.Public


'Argument wins the situations but loses the person. So when arguing with your loved ones, remember that situations are not more important than your loved ones...'

ಎರಡನೆಯ ಮೈಸೂರು ಯುದ್ಧ

ಎರಡನೆಯ ಮೈಸೂರು ಯುದ್ಧ




ಎರಡನೆಯ ಮೈಸೂರು ಯುದ್ಧ (೧೭೮೦-೧೭೮೪) ಮೈಸೂರು ಸಂಸ್ಥಾನಕ್ಕೂ ಬ್ರಿಟಷರಿಗೂ ನಡೆದ ಯುದ್ಧದ ಸರಣಿಯಲ್ಲಿ ಎರಡನೆಯದು. ಅಮೆರಿಕದಲ್ಲಿ ನಡೆಯುತ್ತಿದ್ದ ಕ್ರಾಂತಿಕಾರಿ ಹೋರಾಟದ ಫಲವಾಗಿ ಬ್ರಿಟಷರು ಮತ್ತು ಫ್ರೆಂಚರ ನಡುವೆ ನಡೆದ ಕದನದ ಸುಳಿಯಲ್ಲಿ ಫ್ರೆಂಚರ ಸ್ನೇಹದಲ್ಲಿದ್ದ ಮೈಸೂರು ಕೂಡಾ ಸಿಕ್ಕಿತು.
ಆ ಕಾಲದಲ್ಲಿ ಮೈಸೂರನ್ನು ಆಳುತ್ತಿದ್ದವನು ( ರಾಜಾ ಎಂಬ ಗೌರವನಾಮ ಇಲ್ಲದಿದ್ದರೂ) ಹೈದರ್‍ ಆಲಿ. ಹಿಂದೊಮ್ಮೆ ಮರಾಠರ ವಿರುದ್ಧದ ಯುದ್ಧದಲ್ಲಿ ಬ್ರಿಟಿಷರ ವಿಶ್ವಾಸಘಾತುಕತನವನ್
ನು ಕಂಡು ಕಿಡಿಕಿಡಿಯಾಗಿದ್ದ ಹೈದರ್‍ ಆಲಿ ಬ್ರಿಟಿಷರೊಂದಿಗೆ ಸೇಡು ತೀರಿಸಿಕೊಳ್ಳಲು , ಫ್ರೆಂಚರ ಸಹಾಯಕ್ಕೆ ಒಮ್ಮನಸ್ಸಿನಿಂದ ಧುಮುಕಿದ. ೧೭೭೮ರಲ್ಲಿ ಬ್ರಿಟನ್ ಮೇಲೆ ಯುದ್ಧ ಸಾರಿದಾಗ, ಈಗಾಗಲೇ ಮದರಾಸಿನಲ್ಲಿ ಬಲವಾಗಿ ಬೇರುಬಿಟ್ಟಿದ್ದ ಬ್ರಿಟೀಷರು ,ಫ್ರೆಂಚರನ್ನು ಭಾರತದಿಂದ ಓಡಿಸುವ ಪಣ ತೊಟ್ಟರು. ಮಲಬಾರ್‍ ತೀರದ ಮಾಹೆಯನ್ನು ಗೆದ್ದುಕೊಂಡ ಬ್ರಿಟೀಷರು , ಹೈದರ ಆಶ್ರಿತನೊಬ್ಬನ ಕೆಲ ಭೂಭಾಗಗಳನ್ನೂ ಸ್ವಾಧೀನಕ್ಕೆ ತೆಗೆದುಕೊಂಡರು.
ಸೇಡು ತೀರಿಸಿಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಿದ್ದ ಹೈದರಾಲಿಯು , ಮರಾಠರು ತನ್ನಿಂದ ಕಿತ್ತುಕೊಂಡ ಪ್ರದೇಶಗಳನ್ನು ಮರುಪಡೆಯುವುದರಲ್ಲಿ ಯಶಸ್ವಿಯಾದನು. ಕೃಷ್ಣಾ ನದಿಯವರೆಗ ಹರಡಿದ್ದ ತನ್ನ ರಾಜ್ಯದಿಂದ , ಬೆಂಕಿ ಹೊತ್ತಿ ಉರಿಯುತ್ತಿದ್ದ ಗ್ರಾಮಗಳ ಮದ್ಯೆ , ಕಣಿವೆ, ಘಟ್ಟಗಳನ್ನು ಬಳಸಿಕೊಂಡು, ಮದರಾಸಿನಿಂದ ಕೇವಲ ೪೫ ಮೈಲಿ ( ೭೨ ಕಿ.ಮೀ) ದೂರದ ಕಾಂಜೀವರವನ್ನು ಒಂದಷ್ಟೂ ಪ್ರತಿರೋಧವಿಲ್ಲದೆ ತಲುಪಿದನು. ಮದರಾಸಿನ ಸೈಂಟ್ ಥಾಮಸ್ ಮೌಂಟಿನಲ್ಲಿ ೫೨೦೦ ಸೈನಿಕರೊಂದಿಗೆ ಬೀಡುಬಿಟ್ಟಿದ್ದ , ಸರ್‍ ಹೆಕ್ಟರ್‍ ಮನ್ರೋಗೆ ಬೆಂಕಿಯ ಜ್ವಾಲೆಗಳು ಕಾಣಿಸಿದ ನಂತರವೇ ಬ್ರಿಟೀಷರ ಪ್ರತಿಕ್ರಿಯೆಗೆ ಚಾಲನೆ ಸಿಕ್ಕಿತು. ಗುಂಟೂರಿಂದ ವಾಪಸು ಕರೆಸಿದ್ದ ಕರ್ನಲ್ ಬೈಲೀಯ ಕೈಕೆಳಗಿನ ಸಣ್ಣ ಸೈನ್ಯವನ್ನು ಹೈದರಾಲಿಯನ್ನು ಎದುರಿಸಲು ಕಳುಹಿಸಲಾಯಿತು. ಅಪ್ರತಿಮ ಧೈರ್ಯದಿಂದ ಕಾದಾಡಿದರೂ, ಬೈಲಿಯ ೨೮೦೦ ಜನರ ಸೇನೆ ಸಂಪೂರ್ಣ ಸೋಲಪ್ಪಿತು. ಆದಿನ ೧೭೮೦ರ ಸೆಪ್ಟೆಂಬರ್‍ ೧೦.

ಚಿತ್ತೂರಿನ ಪುನರ್‍ ಸ್ವಾಧೀನ
ಹೈದರಾಲಿಯ ಹಿರಿಯ ಮಗ , ಟಿಪ್ಪು ಸುಲ್ತಾನನು ೧೭೬೯-೭೨ರಲ್ಲಿ ನಡೆದ ಮೈಸೂರು ಮರಾಠಾ ಯುದ್ಧದಲ್ಲಿ ಅತೀವ ಆಸಕ್ತಿ ತೋರಿದ್ದನು. ೧೭೭೨ರಲ್ಲಿ ಪೇಶ್ವೆ ಮಾಧವರಾಯನು ಅಳಿದ ಮೇಲೆ, ಮರಾಠರು ಹೈದರನಿಂದ ಕಿತ್ತುಕೊಂಡಿದ್ದ ಪ್ರದೇಶಗಳನ್ನು ಮತ್ತೆ ವಾಪಸು ಗಳಿಸಿಕೊಳ್ಳಲು , ಮೈಸೂರಿನ ಉತ್ತರ ಭಾಗಕ್ಕೆ ಟಿಪ್ಪುವನ್ನು ಕಳುಹಿಸಲಾಯಿತು. ಎರಡನೆಯ ಮೈಸೂರು ಯುದ್ಧದ ಸಮಯದಲ್ಲಿಯಾಗಲೇ ಯುದ್ಧನೀತಿಯಲ್ಲೂ, ಮುತ್ಸದ್ದಿತನದಲ್ಲಿಯೂ ಟಿಪ್ಪು ಬಹಳಷ್ಟು ಪರಿಣತಿ ಸಂಪಾದಿಸಿದ್ದ. ೧೭೮೦ರ ಸೆಪ್ಟೆಂಬರಿನ ಪೊಳಿಲೂರಿನ ಯುದ್ಧದಲ್ಲಿ ಕರ್ನಲ್ ಬೈಲಿಯ ಸೈನ್ಯವನ್ನು ಬಗ್ಗುಬಡಿದನು. ಬ್ರಿಟೀಷರು ಭಾರತದಲ್ಲಿ ಎದುರಿಸಿದ ಮೊಟ್ಟಮೊದಲ ಮತ್ತು ಗಂಭೀರ ಸೋಲು ಇದಾಗಿತ್ತು. ಸಂಪೂರ್ಣ ಬ್ರಿಟೀಷ್ ಸೇನೆ ಹತವಾಯಿತು ಅಥವಾ ಸೆರೆ ಸಿಕ್ಕಿತು. ಇದ್ದ ೮೬ ಸೇನಾಧಿಕಾರಿಗಳಲ್ಲಿ ೩೬ ಜನ ಸತ್ತರು. ಸೆರೆ ಸಿಕ್ಕ ೩೮೨೦ ಸೈನಿಕರಲ್ಲಿ ೫೦೮ ಯೂರೋಪಿಯನ್ನರಿದ್ದರು. ಕರ್ನಲ್ ಬೈಲೀ ಸ್ವತಃ ಸೆರೆಸಿಕ್ಕಿದ. ಇದರಿಂದ ಬ್ರಿಟೀಷರಲ್ಲಿ ಉಂಟಾದ ತಲ್ಲಣದ ಪರಿಣಾಮವಾಗಿ ಮದರಾಸಿನ ಬ್ಲಾಕ್ ಟೌನ್ ಅರ್ಧಕ್ಕರ್ಧ ಖಾಲಿಯಾಯಿತು. ಭಾರತದ ಮೂರು ಮಹಾರಾಜರು, ಮೊಘಲ್ ಚಕ್ರವರ್ತಿ ಶಾ ಅಲಂ, ಔಂಧಿನ ನವಾಬ ಶುಜಾ ಉದ್ದೌಲಾ ಮತ್ತು ಬಂಗಾಳದ ನವಾಬ ಮೀರ್‍ ಕಾಸೀಮರನ್ನು ಒಂದೇ ಯುದ್ಧದಲ್ಲಿ ಸೋಲಿಸಿದ್ದ , ಬಕ್ಸಾರ್‍ ಯುದ್ಧದ ವೀರ, ಸರ್‍ ಹೆಕ್ಟರ್‍ ಮನ್ರೋ ಟಿಪ್ಪುವಿನ ಎದುರು ಬರಲಿಲ್ಲ. ತನ್ನೆಲ್ಲ ಫಿರಂಗಿಗಳನ್ನು ಕಾಂಜೀವರಂನ ಕೆರೆಯಲ್ಲಿ ಎಸೆದು ಆತ ಮದರಾಸು ಬಿಟ್ಟು ಪರಾರಿಯಾದ.
೧೭೮೨ರ ಫೆಬ್ರುವರಿ ೧೮ರಂದು ಟಿಪ್ಪು ಕರ್ನಲ್ ಬ್ರೈತ್ ವೈಟನನ್ನು ತಂಜಾವೂರಿನ ಹತ್ತಿರದ ಅನ್ನಗುಡಿ ಎಂಬಲ್ಲಿ ಸೋಲಿಸಿದ.ಬ್ರಿಟೀಷ್ ಸೈನ್ಯದಲ್ಲಿ ೧೦೦ ಯೂರೋಪಿಯನ್ನರೂ, ೩೦೦ಅಶ್ವಸೈನಿಕರೂ, ೧೪೦೦ ಕಾಲಾಳುಗಳೂ ಮತ್ತು ೧೪ ಇತರ ಶಸ್ತ್ರಾಸ್ತ್ರಗಳೂ ಇದ್ದವು . ಎಲ್ಲಾ ಸೈನಿಕರನ್ನು ಸೆರೆ ಹಿಡಿದ ಟಿಪ್ಪು, ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಂಡ. ಆಗ ಸಾಮಾನ್ಯವಾಗಿದ್ದ, ಕೆಲವೇ ನೂರು ಯೂರೋಪಿಯನ್ ಸೈನಿಕರ ತುಕಡಿಗಳು ಹೈದರ್‍ ಮತ್ತು ಟಿಪ್ಪು ಬರುವವರೆಗೆ ಭಾರತಲ್ಲಿ ವ್ಯಾಪಕ ಹಾನಿಯೆಸಗಿದ್ದವು. ೧೭೮೧ರ ಡಿಸೆಂಬರಿನಲ್ಲಿ ಟಿಪ್ಪು ಬ್ರಿಟೀಷರಿಂದ ಚಿತ್ತೂರನ್ನು ಯಶಸ್ವಿಯಾಗಿ ಗೆದ್ದುಕೊಂಡ. ಈ ಎಲ್ಲ ಯುದ್ಧಗಳಿಂದ , ಡಿಸೆಂಬರಿ ೧೭೮೨ರಲ್ಲಿ ಹೈದರ್‍ ಕೊನೆಯುಸಿರೆಳೆಯುವ ವೇಳೆಗಾಗಲೇ ಟಿಪ್ಪು ಸಾಕಷ್ಟು ಯುದ್ಧಾನುಭವ ಗಳಿಸಿಕೊಂಡಿದ್ದ.

ಮಂಗಳೂರಿನ ಒಪ್ಪಂದ
ಮಂಗಳೂರಿನ ಒಪ್ಪಂದದೊಂದಿಗೆ ಎರಡನೆರಯ ಮೈಸೂರು ಯುದ್ಧ ಕೊನೆಗೊಂಡಿತು. ಭಾರತದ ಇತಿಹಾಸದಲ್ಲಿ ಇದೊಂದು ಮುಖ್ಯ ದಾಖಲೆ. ಭಾರತದ ವ್ಯಕ್ತಿಯೊಬ್ಬ ಬ್ರಿಟಿಷರಿಗೆ ಪಾಠ ಕಲಿಸಿ, ಅವರನ್ನು ದೀನ ಸ್ಥಿತಿಗೆ ತಂದದ್ದು ಇದೇ ಕೊನೆಯ ಬಾರಿಯಾಗಿತ್ತು. ವಾರನ್ ಹೇಸ್ಟಿಂಗ್ಸ್ ಇದನ್ನು ಅವಮಾನಕಾರೀ ಶಾಂತಿಸ್ಥಾಪನೆ ಎಂದು ಕರೆದು, "ಬ್ರಿಟೀಷ್ ದೇಶದ ವಿಶ್ವಾಸ ಮತ್ತು ಗೌರವವನ್ನು ಭಂಗಿಸಿದ" ಮದರಾಸು ಸರಕಾರಕ್ಕೆ ತಕ್ಕ ಶಿಕ್ಷೆ ನೀಡುವಂತೆ ಬಬ್ರಿಟನ್ನಿನ ರಾಜನಿಗೂ, ಪಾರ್ಲಿಮೆಂಟಿಗೂ ಆಗ್ರಹಿಸಿದ. ಈ ಸೋಲಿನಿಂದ ಮುಖಭಂಗಿತರಾದ ಬ್ರಿಟೀಷರು ಅಂದಿನಿಂದಲೇ ಅಂದರೆ ೧೭೮೪ರ ಮಾರ್ಚ್ ೧೧ ರಿಂದ ಟಿಪ್ಪುವಿನ ಶಕ್ತಿಹರಣಕ್ಕೆ ತೀವ್ರ ಪ್ರಯತ್ನ ನಡೆಸಿದರು.
ಮಂಗಳೂರಿನ ಒಪ್ಪಂದ ಟಿಪ್ಪುವಿನ ಮುತ್ಸದ್ದಿನತನಕ್ಕೆ ಸಾಕ್ಷಿಯಾಗಿದೆ.ದೀರ್ಘ ಯುದ್ಧವನ್ನು ಯಶಸ್ವಿಯಾಗಿ ಮುಗಿಸಿದ್ದಷ್ಟೇ ಅಲ್ಲ, ಉತ್ತರದ ಪ್ರದೇಶಗಳ ಮೇಲೆ ಕಣ್ಣಿಟ್ಟಿದ್ದ ಮರಾಠರ ಪ್ರಯತ್ನಗಳನ್ನೂ ಅವನು ವಿಫಲಗೊಳಿಸಿದನು.

--
http://i33.tinypic.com/xdxsvl.jpg

 
NaveenChinthakaaya - Creative Guy.......
http://chinthakaaya.blogspot.com/
http://cid-f2be635aeac89a38.skydrive.live.com/browse.aspx/.Public


'Argument wins the situations but loses the person. So when arguing with your loved ones, remember that situations are not more important than your loved ones...'

Friday, November 2, 2012

SHRI HAYAGRIVA ॐ

SHRI HAYAGRIVA ॐ
Artist: Jadurani devi dasi
Artwork courtesy of The Bhaktivedanta Book Trust International,Inc. http://www.krishna.com/





Prahlada Maharaja prayed:
"My dear Lord, when You appeared as Hayagriva, with the head of a horse, You killed two demons known as Madhu and Kaitabha, who were full of the modes of passion and ignorance. Then You delivered the Vedic knowledge to Lord Brahma. For this reason, all the great saints accept Your forms as transcendental, untinged by material qualities."~Srimad Bhagavatam 7.9.37
--
http://i33.tinypic.com/xdxsvl.jpg

 
NaveenChinthakaaya - Creative Guy.......
http://chinthakaaya.blogspot.com/
http://cid-f2be635aeac89a38.skydrive.live.com/browse.aspx/.Public


'Argument wins the situations but loses the person. So when arguing with your loved ones, remember that situations are not more important than your loved ones...'