ರಾಮಾಯಣ ಹಿಂದೂಗಳ ಪವಿತ್ರಗ್ರಂಥಗಳಲ್ಲಿ ಮುಖ್ಯವಾದುದು. ಈ ಬೃಹತ್ಕಾವ್ಯವು ವಾಲ್ಮೀಕಿ ಋಷಿಯಿಂದ ರಚಿಸಲ್ಪಟ್ಟಿದೆ. ರಾಮಾಯಣವನ್ನು ತತ್ಪುರುಷ ಸಮಾಸವಾಗಿ ವಿಭಜಿಸಿದರೆ (ರಾಮನ+ಆಯಣ=ರಾಮಾಯಣ) "ರಾಮನ ಕಥೆ" ಎಂಬ ಅರ್ಥ ಬರುತ್ತದೆ. ರಾಮಾಯಣವು ೨೪೦೦೦ ಶ್ಲೋಕಗಳಿಂದುಂಟಾದ ೭ ಕಾಂಡಗಳಿಂದ ಕೂಡಿದೆ. ರಾಮಾಯಣದ ಕಥೆಯ ಮುಖ್ಯವಾಗಿ ಅಯೋಧ್ಯೆಯ ಸೂರ್ಯ ವಂಶದ ರಾಜಪುತ್ರ ರಾಮ, ಆತನ ಮಡದಿ ಸೀತೆ ಹಾಗೂ ಸೀತೆಯ ಅಪಹರಣ ಮಾಡಿದ ರಾವಣನ ಸಂಹಾರ ಕುರಿತಾಗಿದೆ. ವಾಲ್ಮೀಕಿಯಿಂದ ರಚಿತವಾದ ಈ ಕಾವ್ಯ ರಾಮನ ಮಕ್ಕಳಾದ
ಲವ-ಕುಶರಿಂದ ಪ್ರಚಲಿತವಾಯಿತು.
ಇತ್ತೀಚಿನ ಸಂಶೋಧನೆಗಳಂತೆ ರಾಮಾಯಣದ ರಚನಾ ಕಾಲ ಕ್ರಿ.ಪೂ ೫ನೇ ಶತಮಾನದಿಂದ ಕ್ರಿ.ಪೂ ೧ನೇ ಶತಮಾನವೆಂದು ನಿರ್ಧರಿಸಲಾಗಿದೆ. ಈ ಕಾಲವು ಮಹಾಭಾರತದ ಮೊದಲ ಆವೃತ್ತಿಗಳಿಗೆ ಹತ್ತಿರವಾದ ಕಾಲ ಎಂದು ಹೇಳಲಾಗುತ್ತದೆ. ಆದರೆ ಬೇರೆ ಪೌರಾಣಿಕಗಳಂತೆ ಈ ಕಾವ್ಯವೂ ಅನೇಕ ಮಾರ್ಪಾಡುಗಳಿಗೆ ಒಳಗಾಗಿರುವುದರಿಂದ ಇದರ ನಿಖರವಾದ ಕಾಲ ಊಹಿಸುವುದು ಕಷ್ಟವಾಗಿದೆ.
ರಾಮಾಯಣವು ನಂತರದ ಸಂಸ್ಕೃತ ಕಾವ್ಯದ ಮೇಲೆ ಶ್ಲೋಕದ ಹೊಸ ಛಂದಸ್ಸಿನಿಂದಾಗಿ ಬಹುಮುಖ್ಯ ಪ್ರಭಾವ ಬೀರಿದೆ. ಇದು ಪುರಾತನ ಹಿಂದೂ ಋಷಿಗಳ ಬೋಧನೆಗಳನ್ನು ಕಥಾಮಾಧ್ಯಮದ ಮೂಲಕ, ಹಾಗೂ ತಾತ್ವಿಕ ಮತ್ತು ಭಕ್ತಿಸಂಬಂಧಿತ ಚರ್ಚಾಭಾಗಗಳ ಮೂಲಕ ಒಳಗೊಂಡಿದೆ. ರಾಮ, ಸೀತೆ, ಲಕ್ಷ್ಮಣ, ಭರತ, ಹನುಮಂತ ಮತ್ತು ಕಥೆಯ ಖಳನಾಯಕನಾದ ರಾವಣ ಈ ಎಲ್ಲ ಪಾತ್ರಗಳು ಭಾರತದ ಸಾಂಸ್ಕೃತಿಕ ಪ್ರಜ್ಞೆಯ ಭಾಗವಾಗಿವೆ.
ಪ್ರಾಚೀನ ಭಾರತದ ಪ್ರಮುಖ ಸಾಹಿತ್ಯಕ ಕೃತಿಗಳಲ್ಲೊಂದಾದ ರಾಮಾಯಣವು ಭಾರತ ಉಪಖಂಡದ ಕಲೆ ಮತ್ತು ಸಂಸ್ಕೃತಿಯ ಮೇಲೆ ಆಳವಾದ ಪ್ರಭಾವ ಬೀರಿದೆ. ರಾಮನ ಕಥೆಯು ಅನೇಕ ಭಾಷೆಗಳಲ್ಲಿ ನಂತರದ ಬಹಳಷ್ಟು ಸಾಹಿತ್ಯಕ್ಕೆ ಸ್ಫೂರ್ತಿಯಾಯಿತು. ಪ್ರಭಾವಗೊಂಡ ಪ್ರಮುಖರೆಂದರೆ, ೧೬ನೇ ಶತಮಾನದ ಹಿಂದಿ ಕವಿ ತುಳಸೀದಾಸರು, ೧೩ನೇ ಶತಮಾನದ ತಮಿಳು ಕವಿ ಕಂಬ, ೨೦ನೇ ಶತಮಾನದ ಕನ್ನಡದ ರಾಷ್ಟ್ರಕವಿ ಕುವೆಂಪು(ರಾಮಾಯಣ ದರ್ಶನಂ).
ರಾಮಾಯಣ ಕೇವಲ ಹಿಂದೂ ಧಾರ್ಮಿಕ ಕೃತಿಯಾಗಿ ಉಳಿದಿಲ್ಲ. ಎಂಟನೆ ಶತಮಾನದಿಂದ ಅನೇಕ ಭಾರತೀಯ ವಸಾಹತುಗಳು ದಕ್ಷಿಣಪೂರ್ವ ಏಷ್ಯಾದಲ್ಲಿ ಏರ್ಪಟ್ಟಾಗ ರಾಮಾಯಣದ ಕಥೆ ವಿವಿಧ ರೂಪಾಂತರಗಳ ಮೂಲಕ ಆ ದೇಶಗಳಿಗೂ ಹರಡಿತು. ಈ ಪ್ರದೇಶದಲ್ಲಿ ಖ್ಮೇರ್, ಮಜಪಾಹಿತ್, ಶೈಲೇಂದ್ರ, ಚಂಪಾ, ಶ್ರೀವಿಜಯ ಮೊದಲಾದ ಕೆಲವು ಮುಖ್ಯ ಭಾರತೀಯ ಸಾಮ್ರಾಜ್ಯಗಳು ಸ್ಥಾಪಿಸಲ್ಪಟ್ಟವು. ಇವುಗಳ ಮೂಲಕ ರಾಮಾಯಣ ಇಂಡೊನೇಷ್ಯಾ (ಜಾವಾ, ಸುಮಾತ್ರಾ ಮತ್ತು ಬೋರ್ನಿಯೊ), ಥೈಲೆಂಡ್, ಕಾಂಬೋಡಿಯ, ಮಲೇಷಿಯ, ವಿಯೆಟ್ನಾಮ್ ಮತ್ತು ಲಾಓಸ್ ಗಳಲ್ಲಿ ಸಾಹಿತ್ಯ, ಶಿಲ್ಪಕಲೆ ಮತ್ತು ನಾಟಕ ಮಾಧ್ಯಮಗಳಲ್ಲಿ ವ್ಯಕ್ತವಾಯಿತು.

NaveenChinthakaaya - Creative Guy.......
http://chinthakaaya.blogspot.com/
http://cid-f2be635aeac89a38.skydrive.live.com/browse.aspx/.Public
'Argument wins the situations but loses the person. So when arguing with your loved ones, remember that situations are not more important than your loved ones...'

No comments:
Post a Comment