Welcome To Savi Savi Nenapu

Naveen Chinthakaaya

Tuesday, November 20, 2012

ಯಾವ ದಿನ ಕೂದಲುಗಳನ್ನು ಕತ್ತರಿಸಬಾರದು





ಯಾವ ದಿನ ಕೂದಲುಗಳನ್ನು ಕತ್ತರಿಸಬಾರದು? ಏಕೆ ಕತ್ತರಿಸಬಾರದು?

ಅ.ಆದಷ್ಟು ಅಶುಭ ದಿನ, ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನ, ಹಾಗೆಯೇ ಸುಡುಬಿಸಿಲಿರುವ ಮಧ್ಯಾಹ್ನ, ಸಾಯಂಕಾಲ ಮತ್ತು ರಾತ್ರಿಯ ಹೊತ್
ತು ಕೂದಲುಗಳನ್ನು ಕತ್ತರಿಸದಿರುವುದರ ಹಿಂದಿನ ಶಾಸ್ತ್ರ

೧.ಆದಷ್ಟು ಅಶುಭ ದಿನಗಳಂದು, ಅಮಾವಾಸ್ಯೆ ಮತ್ತು ಹುಣ್ಣಿಮೆ ಈ ತಿಥಿಗಳಂದು ಕೂದಲುಗಳನ್ನು ಕತ್ತರಿಸಬಾರದು; ಏಕೆಂದರೆ ಈ ದಿನಗಳಂದು ವಾಯುಮಂಡಲದಲ್ಲಿ ರಜ-ತಮಾತ್ಮಕ ಲಹರಿಗಳ ಕಾರ್ಯದ ಪ್ರಮಾಣವು ಹೆಚ್ಚಿರುತ್ತದೆ.

೨.ಕೂದಲುಗಳನ್ನು ಕತ್ತರಿಸಿದ ನಂತರ ಅವುಗಳ ತುದಿಗಳು ತೆರೆಯಲ್ಪಡುವುದರಿಂದ ಕೇಶನಳಿಕೆಗಳಿಂದ ರಜ-ತಮಾತ್ಮಕ ಲಹರಿಗಳು ಕೂದಲುಗಳಲ್ಲಿ ಸೇರಿಕೊಂಡು ಕೂದಲುಗಳ ಬುಡದಲ್ಲಿ ಘನೀಭವಿಸುತ್ತವೆ.

೩.ಇದರಿಂದ ಕೂದಲುಗಳ ಬುಡದಲ್ಲಿ ಕೆಟ್ಟ ಶಕ್ತಿಗಳ ಸ್ಥಾನಗಳು ನಿರ್ಮಾಣವಾಗುತ್ತವೆ; ಆದುದರಿಂದ ರಜ-ತಮದ ಪ್ರಾಬಲ್ಯವಿರುವ ದಿನಗಳಲ್ಲಿ ಕೂದಲುಗಳನ್ನು ಕತ್ತರಿಸಿಕೊಳ್ಳುವ ಕೃತಿಯನ್ನು ಮಾಡಬಾರದು.

೪.ಆದಷ್ಟು ಸಾಯಂಕಾಲದ ಸಮಯ ಅಥವಾ ರಾತ್ರಿ, ಹಾಗೆಯೇ ಸುಡುಬಿಸಿಲಿರುವ ಮಧ್ಯಾಹ್ನದ ಹೊತ್ತಿನಲ್ಲಿ ಕೂದಲುಗಳನ್ನು ಕತ್ತರಿಸಬಾರದು; ಏಕೆಂದರೆ ಈ ಕಾಲವೂ ರಜ-ತಮಾತ್ಮಕ ಲಹರಿಗಳನ್ನು ಜಾಗೃತಗೊಳಿಸುವಂತಹದ್ದಾಗಿದೆ.

ಆ.ರಾಮನವಮಿ, ಹನುಮಾನಜಯಂತಿಗಳಂತಹ ಉತ್ಸವಗಳ ದಿನದಂದು ಕೂದಲುಗಳನ್ನು ಕತ್ತರಿಸಿಕೊಳ್ಳಬಾರದು!: ರಾಮನವಮಿ, ಹನುಮಾನಜಯಂತಿ ಇವುಗಳಂತಹ ಉತ್ಸವಗಳ ದಿನ ಕೂದಲುಗಳನ್ನು ಕತ್ತರಿಸಿಕೊಳ್ಳಬಾರದು; ಏಕೆಂದರೆ ಇಂತಹ ದಿನ ವಾಯು ಮಂಡಲದಲ್ಲಿ ಸಾತ್ತ್ವಿಕ ಲಹರಿಗಳ ಪ್ರಮಾಣವು ಅಧಿಕವಿರುತ್ತದೆ. ಇಂತಹ ದಿನ ಕೂದಲುಗಳನ್ನು ಕತ್ತರಿಸಿಕೊಳ್ಳುವಂತಹ ಅಶುಭ ಕೃತಿಯನ್ನು ಮಾಡಿ ವಾಯುಮಂಡಲದಲ್ಲಿ ರಜ-ತಮವನ್ನು ಪಸರಿ ಸುವ ಕಾರ್ಯವನ್ನು ಮಾಡುವುದರಿಂದ ಜೀವಕ್ಕೆ ಸಮಷ್ಟಿ ಪಾಪವನ್ನು ಎದುರಿಸಬೇಕಾಗುತ್ತದೆ.
ಇ.ಜನ್ಮವಾರ ಮತ್ತು ಜನ್ಮತಿಥಿಯಂದು ಕೂದಲುಗಳನ್ನು ಕತ್ತರಿಸಿಕೊಳ್ಳಬಾರದು!: ಜನ್ಮವಾರ ಮತ್ತು ಜನ್ಮತಿಥಿಯಂದೂ ಕೂದಲುಗಳನ್ನು ಕತ್ತರಿಸಿಕೊಳ್ಳಬಾರದು; ಏಕೆಂದರೆ ಇಂತಹ ದಿನ ನಮ್ಮ ಪ್ರಕೃತಿಗೆ ಸಂಬಂಧಿಸಿದ ಗ್ರಹ, ನಕ್ಷತ್ರ, ಹಾಗೆಯೇ ತಾರಾಮಂಡಲದಿಂದ ಬರುವ ಸಾತ್ತ್ವಿಕ ಲಹರಿಗಳನ್ನು ಗ್ರಹಿಸುವ ನಮ್ಮ ಕ್ಷಮತೆಯು ಕಡಿಮೆಯಾಗಿ ಉಪಾಸ್ಯ ದೇವತೆಯಿಂದ ಸಿಗುವ ಚೈತನ್ಯದ ಲಾಭವು ಕಡಿಮೆಯಾಗುತ್ತದೆ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ನಮಗೆ ಹಾನಿಯಾಗು ತ್ತದೆ. ಹಾಗೆಯೇ ಇತರರ ಆಶೀರ್ವಾದದಿಂದ ಸಿಗುವ ಶುಭಫಲವೂ ಕಡಿಮೆಯಾಗುತ್ತದೆ.
ಈ.ನಿಷ್ಕರ್ಷ: ಶುಭದಿನದಂದು ಕೂದಲುಗಳನ್ನು ಕತ್ತರಿಸಿಕೊಳ್ಳುವಂತಹ ಕೃತಿಯನ್ನು ಮಾಡಬಾರದು; ಏಕೆಂದರೆ ಇಂತಹ ದಿನ ಅಶುಭ ಕೃತಿಯನ್ನು ಮಾಡಿದುದರ ಸಮಷ್ಟಿ ಪಾಪ ತಗಲುತ್ತದೆ, ಹಾಗೆಯೇ ಅಶುಭ ದಿನಗಳಂದೂ ಇಂತಹ ಕೃತಿಯನ್ನು ಮಾಡಬಾರದು; ಏಕೆಂದರೆ ಈ ಕೃತಿಯಿಂದ ರಜ-ತಮಾತ್ಮಕ ಲಹರಿಗಳು ದೇಹದಲ್ಲಿ ಬರುವ ಪ್ರಮಾಣವು ಅಧಿಕವಾಗಿರುತ್ತದೆ. ಇತರ ಸಮಯದಲ್ಲಿ ಅಶುಭ ಸಮಯವನ್ನು ಬಿಟ್ಟು ಕೂದಲುಗಳನ್ನು ಕತ್ತರಿಸಿಕೊಳ್ಳಲು ಧರ್ಮವು ಅನುಮತಿ ನೀಡಿದೆ.
(ಆಧಾರ: ಸನಾತನ ಸಂಸ್ಥೆಯ ಗ್ರಂಥ 'ಕೂದಲುಗಳಿಗೆ ತೆಗೆದುಕೊಳ್ಳುವ ಕಾಳಜಿ')

--
http://i33.tinypic.com/xdxsvl.jpg

 
NaveenChinthakaaya - Creative Guy.......
http://chinthakaaya.blogspot.com/
http://cid-f2be635aeac89a38.skydrive.live.com/browse.aspx/.Public


'Argument wins the situations but loses the person. So when arguing with your loved ones, remember that situations are not more important than your loved ones...'

No comments:

Post a Comment